Index   ವಚನ - 420    Search  
 
ಶ್ರೀಗುರುವಿನ ಉಪದೇಶದಿಂದ ಲಿಂಗವನರಿದು, ಆ ಲಿಂಗವನೆ ನೋಡುತ್ತಿರಲು, ಆ ಲಿಂಗದೊಳಗೆ ತನ್ನ ಕಂಡು, ನೋಡುವ ನೋಟವ ಬಿಟ್ಟು ತನ್ನ ಸಮ್ಯಗ್‍ಜ್ಞಾನದಲ್ಲಿ ಸುಖವಿದ್ದು, ಆ ಸಮ್ಯಗ್‍ಜ್ಞಾನವೊಂದೇ ತನ್ನ ರೂಪಾಗಿ ಉಳ್ಳ ಮತ್ತೆ ಅರಿಯಲು ಮರೆಯಲಿಲ್ಲದೆ ತೆರಹಿಲ್ಲದಿಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾದ ಲಿಂಗೈಕ್ಯನು.