Index   ವಚನ - 421    Search  
 
ತೆರಹಿಲ್ಲದ ಕುರುಹಿಲ್ಲದ ಅರಿವಿಗಗೋಚರವಾದ ಮಹಾಪ್ರಸಾದವ ಕೊಂಡು, ತಾ ಪ್ರಸಾದವರೂಪನಾದ ಬಳಿಕ, ಮುಖ್ಯಲಕ್ಷ್ಯಾರ್ಥ ಮೊದಲಾದ ಸರ್ವಾಲಂಬನ ಉಂಟೇ? ಇಲ್ಲವಾಗಿ. ಮನವಾತ್ಮಜ್ಯೋತಿಯಲಡಗಿ, ಜ್ಞಾನ ಜ್ಞೇಯಂಗಳೇಕವಾದ ಬಳಿಕ, ಮಾತೃಮೇಯ ಪ್ರಮಾಣಾದಿ ವ್ಯವಹಾರಗಳುಂಟೇ? ಇಲ್ಲವಾಗಿ. ಇದು ಕಾರಣ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ನಿಶ್ಚಿಂತ ನಿವಾಸಿ.