ತೆರಹಿಲ್ಲದ ಕುರುಹಿಲ್ಲದ ಅರಿವಿಗಗೋಚರವಾದ
ಮಹಾಪ್ರಸಾದವ ಕೊಂಡು, ತಾ ಪ್ರಸಾದವರೂಪನಾದ ಬಳಿಕ,
ಮುಖ್ಯಲಕ್ಷ್ಯಾರ್ಥ ಮೊದಲಾದ ಸರ್ವಾಲಂಬನ ಉಂಟೇ?
ಇಲ್ಲವಾಗಿ.
ಮನವಾತ್ಮಜ್ಯೋತಿಯಲಡಗಿ, ಜ್ಞಾನ ಜ್ಞೇಯಂಗಳೇಕವಾದ ಬಳಿಕ,
ಮಾತೃಮೇಯ ಪ್ರಮಾಣಾದಿ ವ್ಯವಹಾರಗಳುಂಟೇ? ಇಲ್ಲವಾಗಿ.
ಇದು ಕಾರಣ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಶರಣ ನಿಶ್ಚಿಂತ ನಿವಾಸಿ.