Index   ವಚನ - 422    Search  
 
ಲಿಂಗವೇ ತಾನಾಗಿ, ತಾನೇ ಲಿಂಗವಾಗಿ ಲಿಂಗಲೀಯವಾದ ಲಿಂಗೈಕ್ಯಂಗೆ ವಿಶ್ವಮೋಹಿನಿ ಶಕ್ತಿ ಮೋಹಕವಿಲ್ಲದೆ ಹೋಯಿತ್ತು. ಇನ್ನು ಶಬ್ದಾದಿ ವಿಷಯೇಂದ್ರಿಯಂಗಳು ವಿಷಯಭೋಗಂಗಳು ಇಲ್ಲದೆ ಹೋದವು. ಭಾನುತೇಜೋಜಾಲ ಭಾನುವಿನೊಳಡಗಿದಂತೆ ಸರ್ವ ಕರಣಂಗಳು ತನ್ನೊಳಗಡಗಿ ತಾನೆ ಉಳಿದ ಉಳುಮೆ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು ತಾನೆ ಮತ್ತಿಲ್ಲ.