ಲಿಂಗವೇ ತಾನಾಗಿ, ತಾನೇ ಲಿಂಗವಾಗಿ
ಲಿಂಗಲೀಯವಾದ ಲಿಂಗೈಕ್ಯಂಗೆ
ವಿಶ್ವಮೋಹಿನಿ ಶಕ್ತಿ ಮೋಹಕವಿಲ್ಲದೆ ಹೋಯಿತ್ತು.
ಇನ್ನು ಶಬ್ದಾದಿ ವಿಷಯೇಂದ್ರಿಯಂಗಳು
ವಿಷಯಭೋಗಂಗಳು ಇಲ್ಲದೆ ಹೋದವು.
ಭಾನುತೇಜೋಜಾಲ ಭಾನುವಿನೊಳಡಗಿದಂತೆ
ಸರ್ವ ಕರಣಂಗಳು ತನ್ನೊಳಗಡಗಿ
ತಾನೆ ಉಳಿದ ಉಳುಮೆ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು ತಾನೆ ಮತ್ತಿಲ್ಲ.
Art
Manuscript
Music
Courtesy:
Transliteration
Liṅgavē tānāgi, tānē liṅgavāgi
liṅgalīyavāda liṅgaikyaṅge
viśvamōhini śakti mōhakavillade hōyittu.
Innu śabdādi viṣayēndriyaṅgaḷu
viṣayabhōgaṅgaḷu illade hōdavu.
Bhānutējōjāla bhānuvinoḷaḍagidante
sarva karaṇaṅgaḷu tannoḷagaḍagi
tāne uḷida uḷume
nijaguru svatantrasid'dhaliṅgēśvarana nilavu tāne mattilla.