Index   ವಚನ - 428    Search  
 
ಅರಿಯಬಾರದು ಕುರುಹಿಲ್ಲವಾಗಿ, ಕುರುಹಿಡಿವ ಪರಿ ಇನ್ನೆಂತೊ? ದೇಶ ಕಾಲಂಗಳಿಂದ ಹವಣಿಸಬಾರದುದ, ಉಪಮಿಸುವ ಪರಿ ಇನ್ನೆಂತೊ? ಶಿವ ಶರಣನೆಂಬೆರಡು ನಾಮವಳಿದೊಂದಾದ ಬಳಿಕ, ಸ್ವಯ ಪರವೆಂಬುದನರಿಯದ ಅಪ್ರಮೇಯ ಬ್ರಹ್ಮಾದ್ವೈತಂಗೆ ಯೋಗ ವಿಯೋಗ ಜ್ಞಾತೃ ಜ್ಞಾನ ಜ್ಞೇಯವೆಂಬ ವ್ಯವಹಾರವುಂಟೆ? ಬಂಧ ಮುಕ್ತಿ, ಮಾನಾಪಮಾನ, ಸುಖ ದುಃಖ, ಜ್ಞಾನಾಜ್ಞಾನ, ಹೆಚ್ಚು ಕುಂದುಗಳುಂಟೆ? ಸರ್ವಾಕರ ನಿರಾಕಾರ ನಿರ್ಮಲ ಪರಬ್ರಹ್ಮವು ತಾನೇ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.