Index   ವಚನ - 5    Search  
 
ಅಂಗ ಲಿಂಗವಾಯಿತ್ತೆಂಬಿರಿ, ಲಿಂಗ ಅಂಗವಾಯಿತ್ತೆಂಬಿರಿ. ಅಂಗ ಲಿಂಗ ಸಂಬಂಧ ಎಲ್ಲರಿಗೆ ಎಂತಾಯಿತ್ತು ಹೇಳಿರಣ್ಣಾ. ಅಂಗ ಲಿಂಗ ಸಂಬಂಧವಾದರೆ, ಗುರುವಿನಲ್ಲಿ ಗುಡ್ಡನಾಗಿರಬೇಕು, ಲಿಂಗದಲ್ಲಿ ನಿಷ್ಠನಾಗಿರಬೇಕು, ಜಂಗಮದಲ್ಲಿ ಅವಧಾನಿಯಾಗಿರಬೇಕು. ಇವ ಮೂರರಲ್ಲಿ ದೂರಾಗಿಪ್ಪರ ಎನಗೊಮ್ಮೆ ತೋರದಿರಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.