ಅಂಗ ಲಿಂಗವೆಂದರಿದ ಬಳಿಕ,
ಲಿಂಗ ಅಂಗವೆಂದರಿದ ಬಳಿಕ,
ಇನ್ನೊಂದು ಸಂಗ ಉಂಟೆಂದು ಏಕೆ ಅರಸುವಿರಯ್ಯ?
ಸಂಗ ಉಂಟೆಂಬನ್ನಕ್ಕ ಕಂಗಳ ಪಟಲ ಹರಿದುದಿಲ್ಲ.
ಅದು ಮರವೆಗೆ ಬೀಜ.
ಈ ಮರಹಿಂದಲೆ ನೆರೆ ಮೂರುಲೋಕವೆಲ್ಲ
ಬರುಸೂರೆಹೋಯಿತು.
ಅರಿದ ಶರಣಂಗೆ ಅಂಗಲಿಂಗಸಂಬಂಧವಿಲ್ಲ.
ಅಂಗಲಿಂಗಸಂಬಂಧವಳಿದ ಬಳಿಕ ಪ್ರಾಣಲಿಂಗಸಂಬಂಧ.
ಲಿಂಗಪ್ರಾಣಿ ಇವನರಿದರೆ ಲಿಂಗಸಂಬಂಧಿ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ .