Index   ವಚನ - 7    Search  
 
ಅಂಗಲಿಂಗವೆಂದರಿ[ದು]ದಕ್ಕೆ ಕುರುಹು ಎಂತಿಪ್ಪುದೆಂದರೆ, ಕರುಣರಸಭರಿತವಾಗಿಪ್ಪುದೇ ಕುರುಹು. ಕಂಗಳು ಲಿಂಗವೆಂದರಿ[ದು]ದಕ್ಕೆ ಕುರುಹು ಎಂತಿಪ್ಪುದೆಂದರೆ, ಕಾಮಾದಿಗಳ ಸೃಜಿಸದುದೇ ಕುರುಹು. ಕರವೇ ಲಿಂಗವೆಂದರಿದುದಕ್ಕೆ ಕುರುಹು ಎಂತಿಪ್ಪುದೆಂದರೆ, ಇಹ ಪರ ಮೋಕ್ಷವ ಬಯಸದಿಪ್ಪುದೇ ಕುರುಹು. ಈ ತ್ರಿವಿಧವು ಏಕವಾದರೆ, ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನಲ್ಲಿ ಮಹಾಲಿಂಗೈಕ್ಯವು.