ಅಂಗವದಾರದು? ಲಿಂಗವದಾರದು? ಸಂಗವದಾರದು?
ಸಮರಸವ ದಾರದು? ಸಂದೇಹದಿಂದ ಮುಂದುಗಾಣದೆ
ಒಂದೊಂದ ಕಲ್ಪಿಸಿಕೊಂಡು ಬಂದಿರಲ್ಲಾ ಭವ ಭವದಲ್ಲಿ.
ಅಂಗವೆ ಗುರು, ಲಿಂಗವೆ ಪ್ರಾಣ, ಸಂಗವೆ ಜಂಗಮ,
ಸಮರಸವೆ ಪ್ರಸಾದ.
ಈ ಚತುರ್ವಿಧವು ಒಂದಂಗ.
ಈ ಚತುರ್ವಿಧವ ಶ್ರುತಿ ಸ್ಮೃತಿಗಳರಿಯವು,
ನಿಮ್ಮ ಶರಣಬಲ್ಲ.
ಆ ಶರಣನೆ ಶಿವನವಾ.
ಬಸವಪ್ರಿಯ ಕೂಡಲಚೆನ್ನಸಂಗಮದೇವಾ,
ನಿನ್ನ ನೀನೆ ಬಲ್ಲೆ.
Art
Manuscript
Music
Courtesy:
Transliteration
Aṅgavadāradu? Liṅgavadāradu? Saṅgavadāradu?
Samarasava dāradu? Sandēhadinda mundugāṇade
ondonda kalpisikoṇḍu bandirallā bhava bhavadalli.
Aṅgave guru, liṅgave prāṇa, saṅgave jaṅgama,
samarasave prasāda.
Ī caturvidhavu ondaṅga.
Ī caturvidhava śruti smr̥tigaḷariyavu,
nim'ma śaraṇaballa.
Ā śaraṇane śivanavā.
Basavapriya kūḍalacennasaṅgamadēvā,
ninna nīne balle.