ಅಯ್ಯಾ ಧರೆಯ ಮೇಲೆ ಹುಟ್ಟಿದವರೆಲ್ಲ
ವಾಕ್ಕುಜಾಲವ ಕಲಿತುಕೊಂಡು,
ಅನುಭಾವವ ಬಲ್ಲವೆಂದು ನುಡಿವರು.
ಅನುಭಾವವೆಂತಿಪ್ಪುದೆಂದರಿಯರು.
ತೂರ್ಯಾತೂರ್ಯ ನುಡಿಯ ಪರಾತ್ಪರದ ನುಡಿ ಎಂದು
ಹರಶರಣರ ವಾಕ್ಯವ ಕಲಿತುಕೊಂಡು ನುಡಿದಾಡುವರು.
ತೂರ್ಯಾತೂರ್ಯವೆಂಬುದು ನಾಮರೂಪಿಗುಂಟೆ?
ಪರಾತ್ಪರವೆಂಬ ವಾಕ್ಯ ಮನಸಿಂಗುಂಟೆ?
ಹೆಸರಿಗೆ ಬಾರದ ಘನವೆಂದು ನೀವೆ ಹೇಳುತಿರ್ದು
ಮತ್ತೆ ಹೆಸರಿಗೆ ತಂದು ನುಡಿದಾಡುವರು.
ಇದು ಹುಸಿಯೋ, ದಿಟವೊ? ಇದು ಹಸುಮಕ್ಕಳಾಟ.
ಸಸಿನೆ ನೆನೆದು ಬದುಕಿದೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Ayyā dhareya mēle huṭṭidavarella
vākkujālava kalitukoṇḍu,
anubhāvava ballavendu nuḍivaru.
Anubhāvaventippudendariyaru.
Tūryātūrya nuḍiya parātparada nuḍi endu
haraśaraṇara vākyava kalitukoṇḍu nuḍidāḍuvaru.
Tūryātūryavembudu nāmarūpiguṇṭe?
Parātparavemba vākya manasiṅguṇṭe?
Hesarige bārada ghanavendu nīve hēḷutirdu
matte hesarige tandu nuḍidāḍuvaru.
Idu husiyō, diṭavo? Idu hasumakkaḷāṭa.
Sasine nenedu badukide,
basavapriya kūḍalacennabasavaṇṇā.