Index   ವಚನ - 29    Search  
 
ಅಯ್ಯಾ ನಾನು ದಿಟ್ಟಿಸಿ ನೋಡಿ ನಿಂದು ಬಟ್ಟಬಯಲ ಕಂಡೆ. ಬಟ್ಟಬಯಲೊಳಗೊಂದು [ಮುಟ್ಟಬಾರದ] ಮೃಗವ ಕಂಡೆ. ಆ ಮೃಗ ಹೋದ ಹೆಜ್ಜೆಯ ಕಾಣಬಾರದು, ಮೇದ ಮೋಟನರಿಯಬಾರದು. ಈ ಭೇದವ ನೋಡಿ ಸಾಧಿಸಿಕೊಂಡು ಬರುವನ್ನಕ್ಕ ಆ ಮೃಗವೆನ್ನ ಬಲೆಗೊಳಗಾಯಿತ್ತು. ಆ ಬಲೆಯೊಳಗಣ ಮೃಗದ ತಲೆಯ ಹಿಡಿದು, ನೆಲೆಗೆಟ್ಟು ಹೋದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಇದರನುವ ಬಲ್ಲ ಶರಣರೆಲ್ಲರೂ ತಲೆಹೊಲನ ಹತ್ತಿ ಬಯಲಾದರು. ಇದಕ್ಕೆ ನೀವೇ ಸಾಕ್ಷಿ.