Index   ವಚನ - 32    Search  
 
ಅಯ್ಯಾ ನೀನಿಲ್ಲದಿದ್ದರೆ ಎನಗೆ ಮುನ್ನ ನಾಮ ರೂಪುಂಟೆ? ನೀ ಮಾಡಲಾನಾದೆನಯ್ಯಾ. ಅದು ಕಾರಣವಾಗಿ ನಾ ಬಂದ ಬಂದ ಭವಾಂತರದಲ್ಲಿ ನೀವು ಬರುತ್ತಿದ್ದಿರಾಗಿ, ಇನ್ನೆನ್ನ ಗುರುತಂದೆಗೆ ಬಳಲಿಕೆ ಆಗುತಿದೆ ಎಂದು ನಾ ನೋಡಲಾಗಿ, ನೀವೆನ್ನ ಭವವ ಕೊಂಡಿರಾಗಿ. ಇದು ಕಾರಣ, ಅಂದಂದಿಗೆ ನೂರು ತುಂಬಿತ್ತೆಂಬ ಭೇದವನು ನೀವೆ ತೋರಿದಿರಿ. ಇದನರಿದರಿದು ನಾನು ಹಿಂದಣ ಭವವ ಹರಿದು, ಮುಂದಣ ಭಾವ ಬಯಕೆಯ ಮುಗ್ಧವ ಮಾಡಿ, ಹೊಂದದ ಬಟ್ಟೆಯನೆ ಹೊಂದಿ, ಸದಮಳಾನಂದ ಚೆನ್ನಮಲ್ಲೇಶ್ವರನ ನಂಬಿ ಕೆಟ್ಟು, ಬಟ್ಟಬಯಲಾದೆನಯ್ಯಾ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.