ಆಕಾಶವ ನೂಕುತ್ತಿಯ ಹಾಗೆ ಅಟಗೋಲ ಹಂಗುಂಟೆ?
ಏಕ ಮನವ ನಿಲಿಸುವರೆ, ಬೇರೊಂದು ಸಾಕಾರ ಉಂಟೆ?
ಬೇಕು ಬೇಡೆಂಬವೆರಡಳಿದವಂಗೆ, ಇಹಲೋಕದ ಹಂಗುಂಟೆ?
ಈ ಜೋಕೆ ನಿಮ್ಮೊಳು ಏಕವಾಗಿಹ ಶರಣಂಗಲ್ಲದೆ,
ಲೋಕದ ಮಾನವರಿಗುಂಟೆ?
ನಿಮ್ಮ ನೆಲೆಯನರಿವುದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Ākāśava nūkuttiya hāge aṭagōla haṅguṇṭe?
Ēka manava nilisuvare, bērondu sākāra uṇṭe?
Bēku bēḍembaveraḍaḷidavaṅge, ihalōkada haṅguṇṭe?
Ī jōke nim'moḷu ēkavāgiha śaraṇaṅgallade,
lōkada mānavariguṇṭe?
Nim'ma neleyanarivudu,
basavapriya kūḍalacennabasavaṇṇā.