Index   ವಚನ - 71    Search  
 
ಉಟ್ಟರೆ ತೊಟ್ಟರೇನಯ್ಯ? ನಟ್ಟುವರಂತೆ. ಕೊಟ್ಟರೆ ಕೊಂಡರೇನಯ್ಯ? ವೇಶಿಯರಂತೆ. ಬಿಟ್ಟರೆ ಕಟ್ಟಿದರೇನಯ್ಯ? ಬೈರೂಪನಂತೆ. ಇವಾವಂಗವ ಮಾಡಿದರೇನಯ್ಯ? ಮುಟ್ಟಿ ನಮ್ಮ ಶರಣರೊಡನೆ ಒಡವೆರೆಯದಿದ್ದವರು ಉಟ್ಟಿದರೇನು, ಬಿಟ್ಟಿದ್ದರೇನು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?