Index   ವಚನ - 77    Search  
 
ಊರ ಮೇಲೆ ಊರ ಕಂಡೆ, ನೀರ ಮೇಲೆ ನೀರ ಕಂಡೆ. ಮರನ ಮೇಲೆ ಮರನ ಕಂಡೆ, ಗಿರಿಯ ಮೇಲೆ ಗಿರಿಯ ಕಂಡೆ. ಉರಿಯ ಮೇಲೆ ಉರಿಯ ಕಂಡೆ. ಈ ಭಾರವ ತಾಳಲಾರದೆ, ಆ ಉರಿಯೆ ಎದ್ದು ಊರು ಬೆಂದಿತ್ತು, ನೀರು ಬೆಂದಿತ್ತು, ಮರನು ಬೆಂದಿತ್ತು, ಗಿರಿಯು ಬೆಂದಿತ್ತು. ಆ ಉರಿ ಉಳಿಯಿತ್ತು, ಆ ಉರಿಯನೆರದು ಸಿರಿಯ ಸೆಳದು ಪರಮಸುಖಪರಿಣಾಮದೊಳೋಲಾಡುತ್ತ, ನಿಮ್ಮ ಬರವನೆ ಹಾರುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.