ಪರಾಪರದಲ್ಲಿ ಹುಟ್ಟಿದ ಪಾದೋದಕ.
ಪರಬ್ರಹ್ಮದ ಪರಮಪ್ರಕಾಶವೆ ಪಾದೋದಕ.
ಪರಿಪೂರ್ಣವ ಪ್ರವೇಶಿಸಿಕೊಂಡಿರ್ಪುದೆ ಪಾದೋದಕ.
ಪರಮನಂಘ್ರಿಕಮಲದಲ್ಲಿ ಹುಟ್ಟಿದುದೆ ಪಾದೋದಕ.
ಪರತರದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣ ಐಕ್ಯದೊಳಡಗಿದ ಪಾದೋದಕ. ಅದಕ್ಕೆ ದೃಷ್ಟ :
ಪಾಕಾರಂ ಪರಮಜ್ಞಾನಂ ದೋಕಾರಂ ದೋಷನಾಶನಂ |
ದಕಾರಂ ದಹತೇ ಜನ್ಮ ಕಕಾರಂ ಕರ್ಮಛೇದನಂ ||
ಎಂದುದಾಗಿ, ಇಂತಪ್ಪ ಪಾದೋದಕವ ಕೊಂಡು,
ಪರಿಣಾಮ ತೃಪ್ತಿಯನೆಯ್ದುವ ಸದ್ಭಕ್ತಂಗೆ ನಮೋ ನಮೋ ಎಂಬೆ.
ಬಸವಪ್ರಿಯ ಕೂಡಲಸಂಗಮದೇವಾ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.
Art
Manuscript
Music
Courtesy:
Transliteration
Parabrahmada paramaprakāśave pādōdaka.
Paripūrṇava pravēśisikoṇḍirpude pādōdaka.
Paramanaṅghrikamaladalli huṭṭidude pādōdaka.
Paratarada bhakta māhēśvara prasādi prāṇaliṅgi