ಬಯಲಬ್ರಹ್ಮವೆ ಪಿಂಡಬ್ರಹ್ಮವೆನಿಸಿ,
ಆ ಪಿಂಡಬ್ರಹ್ಮವೆ ಶಿವಶಕ್ತಿಯೆನಿಸಿ,
ಆ ಶಿವಶಕ್ತಿಯ ಪ್ರಪಂಚೇ ಪಂಚಮೂರ್ತಿಯ ಪ್ರಪಂಚೆನಿಸಿ,
ಆ ಪಂಚಮೂರ್ತಿಯ ಪ್ರಪಂಚು ಯುಕ್ತಿಯಿಂ
ಜಗಬ್ರಹ್ಮಾಂಡ ಜೀವ ಜಂತು ಜಾಲ
ಎಂಬತ್ತುನಾಲ್ಕು ಲಕ್ಷ ವರ್ಣಾಶ್ರಮದಲ್ಲಿ ಆಡಿಸಿ,
ಆಡದಂತಿರ್ಪ
ಪರಂಜ್ಯೋತಿ ಬಸವಪ್ರಿಯ
ಕೂಡಲಸಂಗಮದೇವ ಪ್ರಭುವೆ.