ಬ್ರಹ್ಮಾಂಡದ ಬಯಲ ಪಸರಿಸಿ, ಹಿಡಿವರೆ
ಬಯಲಾವುದುಂಟು ಹೇಳಿರಣ್ಣಾ?
ಕಂಗಳ ಮುಂದಣ ಕತ್ತಲೆ ಹರಿವುದಕ್ಕೆ
ಜ್ಯೋತಿ ಆವುದುಂಟು ಹೇಳಿರಣ್ಣಾ ?
ಇಂಗಿತವನರಿದ ಬಳಿಕ, ತ್ರಿವಿಧಕ್ಕೆ ತ್ರಿವಿಧವನಿತ್ತು
ತ್ರಿವಿಧವನರಿದು, ತ್ರಿವಿಧವ ಮರೆದು,
ಕಲಿಯುಗದ ಕತ್ತಲೆಯ ದಾಂಟಿ,
ತನ್ನ ಭವವ ದಾಂಟಿದವಂಗೆ,
ಬ್ರಹ್ಮಾಂಡದ ಬಯಲು ಕೈವಶವಾಯಿತ್ತು.
ಕಂಗಳ ಮುಂದಣ ಕತ್ತಲೆ ಹರಿದುಹೋಯಿತ್ತು,
ನಿಮ್ಮ ಸಂಗಸುಖದೊಳಗಿಪ್ಪ ಲಿಂಗೈಕ್ಯಂಗೆ
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Brahmāṇḍada bayala pasarisi, hiḍivare
bayalāvuduṇṭu hēḷiraṇṇā?
Kaṅgaḷa mundaṇa kattale harivudakke
jyōti āvuduṇṭu hēḷiraṇṇā?
Iṅgitavanarida baḷika, trividhakke trividhavanittu
trividhavanaridu, trividhava maredu,
kaliyugada kattaleya dāṇṭi,
tanna bhavava dāṇṭidavaṅge,
brahmāṇḍada bayalu kaivaśavāyittu.
Kaṅgaḷa mundaṇa kattale hariduhōyittu,
nim'ma saṅgasukhadoḷagippa liṅgaikyaṅge
basavapriya kūḍalacennabasavaṇṇā.