Index   ವಚನ - 186    Search  
 
ಮೂಲಬ್ರಹ್ಮದಲ್ಲಿ ಮೊನೆದೋರಿದ ಪ್ರಸಾದವೆ ಪರಮಪ್ರಣಮ. ಆ ಪ್ರಮಣದ ಪರಮಪ್ರಕಾಶವೆ ಪ್ರಸಿದ್ಧಪ್ರಸಾದ, ಆ ಪ್ರಸಿದ್ಧಪ್ರಸಾದದಿಂದಲೆ ಬ್ರಹ್ಮಾಂಡ ರೂಪುದೋರಿತ್ತು. ಆ ಸ್ವರೂಪವೆ ಪ್ರಸಾದ, ನಿರೂಪೇ ಲಿಂಗೈಕ್ಯ, ಅದಕ್ಕೆ ದೃಷ್ಟ: ತತ್ತ್ವ ಪ್ರದೀಪಿಕಾಯಾಂ: ಪ್ರಸಾದಂ ಮುಕ್ತಿ ಮೂಲಂಚ ಯತ್ಪ್ರಸಾದಂ ಶಿವಸ್ಯ ಚ | ಶಿವಸ್ಸರ್ವಾಧಿದೇವಸ್ಯಾದ್ ವೇದಕರ್ಮೇಷು ತದ್ಘನಂ || ಎಂದುದಾಗಿ, ಇಂತಿದೀಗ ಪ್ರಸಾದ ಮಹಾತ್ಮೆ. ಇದೇ ಪ್ರಸನ್ನಪ್ರಸಾದ, ಇಂತೀ ಪ್ರಸಾದವ ಕೊಂಡವನೆ ಶಿವಕುಲ. ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ,