ಹಸಿವಿನಾಸೆಗೆ ಅಶನವ ಕೊಂಬರು,
ವಿಷಯದಾಸೆಗೆ ಹುಸಿಯ ನುಡಿವರು.
ಹಸನಾಗಿ ವ್ಯಸನವ ಹೊತ್ತು,
ಭಸಿತವ ಹೂಸಿ ವಿಶ್ವವ ತಿರುಗಿದರು.
ಈ ಹುಸಿಯ ಬಿಟ್ಟು, ಮಾಯೆಯ
ಮಸಕವ ಮಾಣ್ದಲ್ಲದೆ
ನಮ್ಮ ಬಸವಪ್ರಿಯ
ಕೂಡಲಚೆನ್ನಬಸವಣ್ಣನ ಕೂಡಾ.
Art
Manuscript
Music
Courtesy:
Transliteration
Hasivināsege aśanava kombaru,
viṣayadāsege husiya nuḍivaru.
Hasanāgi vyasanava hottu,
bhasitava hūsi viśvava tirugidaru.
Ī husiya biṭṭu, māyeya
masakava māṇdallade
nam'ma basavapriya
kūḍalacennabasavaṇṇana kūḍā.