Index   ವಚನ - 243    Search  
 
ಹುಸಿಯ ಹಟ್ಟಿಯಲಿಪ್ಪ ಸೊನಗ, ಹಾಕಿದ ಹಿಟ್ಟಿಗೆ ಬೊಗಳುವಂತೆ. ಆರಾದರು ಕೊಟ್ಟುದೊಂದು ವಾಟುಹಾಸಿಗೆ, ಅವರಿಚ್ಛೆಗೆ ಬೊಗಳುವ ಖೊಟ್ಟಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ಮುಟ್ಟಿ ಅವರ ಸಂಗವ ಮಾಡುವ ಮನುಜಗೆ, ಕರ್ಮ ಕಟ್ಟಿಹುದಲ್ಲದೆ ಮಾಣದು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.