ಹೆತ್ತವರೇ ಹೆಸರಿಡಬೇಕಲ್ಲದೆ,
ತೊತ್ತಿರು ಬಂಟರು ಎತ್ತಬಲ್ಲರೊ?
ಕರ್ತೃ ನಿಮ್ಮ ನೆಲೆಯ ನಿಮ್ಮ
ಒತ್ತಿನಲಿಪ್ಪ ಶರಣರು ಬಲ್ಲರಲ್ಲದೆ,
ಈ ಸತ್ತು ಹುಟ್ಟುವ ಮನುಜರೆತ್ತ ಬಲ್ಲರೊ?
ನಿತ್ಯವಪ್ಪ ಮಹಾಘನ ಗುರು ಮಾತ ನೀನೆ ಬಲ್ಲೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Hettavarē hesariḍabēkallade,
tottiru baṇṭaru ettaballaro?
Kartr̥ nim'ma neleya nim'ma
ottinalippa śaraṇaru ballarallade,
ī sattu huṭṭuva manujaretta ballaro?
Nityavappa mahāghana guru māta nīne balle,
basavapriya kūḍalacennabasavaṇṇā.