ಹೊನ್ನ ಗಳಿಸಿದರೇನಯ್ಯಾ,
ಹೊಲೆಯರ ಮನೆಯಲ್ಲಿದ್ದರೆ?
ಹೆಣ್ಣ ಗಳಿಸಿದರೇನಯ್ಯಾ,
ವೇಶಿಯರ ಮನೆ ದಾಸಿಯಾಗಿದ್ದರೆ?
ಮಣ್ಣ ಗಳಿಸಿದರೇನಯ್ಯಾ,
ಉಣ್ಣದಾಹಾರವನುಂಡರೆ?
ಹೋಗುವ ಹಾಳುಗೇರಿಯಾಗಿರದೆ,
ಇದನರಿದು ಮಹಾಘನವನೆ ಮರೆದು,
ಮತ್ತೆ ಹೊನ್ನು ಹೆಣ್ಣು ಮಣ್ಣು ತನ್ನದೆಂಬರು,
ಕಣ್ಣುಗಾಣದ ಕುರುಡರಂತಾದರು ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Honna gaḷisidarēnayyā,
holeyara maneyalliddare?
Heṇṇa gaḷisidarēnayyā,
vēśiyara mane dāsiyāgiddare?
Maṇṇa gaḷisidarēnayyā,
uṇṇadāhāravanuṇḍare?
Hōguva hāḷugēriyāgirade,
idanaridu mahāghanavane maredu,
matte honnu heṇṇu maṇṇu tannadembaru,
kaṇṇugāṇada kuruḍarantādaru kāṇā,
basavapriya kūḍalacennabasavaṇṇā.