ಅರಿವರತ ಅರುವೆಯ ಅಂಗದಲ್ಲಿ ಕಟ್ಟಿ,
ಬಯಕೆಯರತ ಕೈಯಲ್ಲಿ ತಂಡುಲವನಾಯ್ದುಕೊಂಡು
ಸಂದ ಪ್ರಮಥರ ಅಂಗಳಕ್ಕೆ ಬೇಗ ಹೋಗಿ,
ಕೊಂಡುಬಾರಯ್ಯಾ,
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ಮಾರಯ್ಯಾ.
Art
Manuscript
Music
Courtesy:
Transliteration
Arivarata aruveya aṅgadalli kaṭṭi,
bayakeyarata kaiyalli taṇḍulavanāydukoṇḍu
sanda pramathara aṅgaḷakke bēga hōgi,
koṇḍubārayyā,
mārayyapriya amalēśvaraliṅgakke mārayyā.