ಪ್ರಭುದೇವರು, ಸಿದ್ಧರಾಮಯ್ಯದೇವರು,
ಮಡಿವಾಳ ಮಾಚಯ್ಯ,ಬಸವಣ್ಣ, ಚೆನ್ನಬಸವಣ್ಣ
ಮೊದಲಾದ ಸಕಲಪ್ರಮಥಗಣಂಗಳು
ನೇಮ ನಿತ್ಯದ ಜಂಗಮಲಿಂಗ
ಮುಂತಾದ ಸರ್ವಸಮೂಹಕ್ಕೆ
ತ್ರಿಕರಣಶುದ್ಧವಾಗಿ ಭಾವ ಭ್ರಮೆಯಡಗಿ
ಜೀವವಿಕಾರ ನಿಂದು
ಮಾಡುವ ಮಾಟದ ಸಮಯದಿಂದವೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗದಲ್ಲಿಯೆ ಐಕ್ಯ.
Art
Manuscript
Music
Courtesy:
Transliteration
Prabhudēvaru, sid'dharāmayyadēvaru,
maḍivāḷa mācayya,basavaṇṇa, cennabasavaṇṇa
modalāda sakalapramathagaṇaṅgaḷu
nēma nityada jaṅgamaliṅga
muntāda sarvasamūhakke
trikaraṇaśud'dhavāgi bhāva bhrameyaḍagi
jīvavikāra nindu
māḍuva māṭada samayadindave
mārayyapriya amalēśvaraliṅgadalliye aikya.