Index   ವಚನ - 55    Search  
 
ತುಂಬಿದ ಕೆರೆಗೆ ಅಂಬಿಗ ಹರಿಗೋಲ ಹಾಕಿ ಬಲೆಯ ಬೀಸಿದಂತೆ, ತುಂಬುತ್ತ ಕೆಡಹುತ್ತಿದ್ದು ಲಿಂಗವನೊಡಗೂಡಿದೆವೆಂದು, ಜಂಗಮದ ನೆಲೆಯ ಕಾಣದೆ ಸಂದುಹೋದರಲ್ಲಾ ಈ ಲೋಕದವರೆಲ್ಲ. ಲಿಂಗದ ನೆಲೆಯ ಕಾಂಬುದಕ್ಕೆ, ಹರಿಗೋಲನೆ ಹರಿದು, ಹುಟ್ಟ ಮುರಿದು, ಆ ಬಲೆಯಲ್ಲಿ ಸಿಕ್ಕಿದ ಖಗಮೃಗವನೆ ಕೊಂದು, ಆ ಬಲೆಯನೆ ಕಿತ್ತು, ಅಂಬಿಗ ಸತ್ತು, ಕೆರೆ ಬತ್ತಿ, ಮೆಯ್ಮರೆದಲ್ಲದೆ ಆ ಮಹಾಘನವ ಕಾಣಬಾರದೆಂದರು ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.