ಅಯ್ಯಾ, ಅದೇನು ಕಾರಣವೆಂದಡೆ,
ಕಂಗಳ ಕತ್ತಲೆಯನೆ ಹರಿದಿರಿ
ಮನದ ಕಾಳಿಕೆಯನೆ ಹಿಂಗಿಸಿದಿರಿ,
ಮಾತಿನ ಮೊದಲನೆ ಹರಿದಿರಿ
ಜ್ಯೋತಿಯ ಬೆಳಗನೆ ತೋರಿದಿರಿ,
ಮಾತು ಮಥನವ ಕೆಡಿಸಿದಿರಿ.
ವ್ಯಾಕುಳವನೆ ಬಿಡಿಸಿ, ವಿವೇಕಿಯ ಮಾಡಿ,
ನಿಮ್ಮ ಪಾದದಲ್ಲಿ ಏಕವಾದ ಕಾರಣದಿಂದ
ನಾ ನಿಜ ಮುಕ್ತಳಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Ayyā, adēnu kāraṇavendaḍe,
kaṅgaḷa kattaleyane haridiri
manada kāḷikeyane hiṅgisidiri,
mātina modalane haridiri
jyōtiya beḷagane tōridiri,
mātu mathanava keḍisidiri.
Vyākuḷavane biḍisi, vivēkiya māḍi,
nim'ma pādadalli ēkavāda kāraṇadinda
nā nija muktaḷādenayyā,
appaṇṇapriya cennabasavaṇṇā.