ಅಯ್ಯಾ, ನಾ ಕಾಬುದಕ್ಕೆ ನನ್ನ ಶಕ್ತಿಯಲ್ಲ
ನಿಮ್ಮಿಂದವೆ ಕಂಡೆನಯ್ಯಾ.
ಅದೇನು ಕಾರಣವೆಂದಡೆ:
ತನುವ ತೋರಿದಿರಿ ,ಮನವ ತೋರಿದಿರಿ, ಘನವ ತೋರಿದಿರಿ.
ತನುವ ಗುರುವಿಗಿತ್ತು,ಮನವ ಲಿಂಗಕ್ಕಿತ್ತು.
ಧನವ ಜಂಗಮಕ್ಕಿತ್ತು,
ಇವೆಲ್ಲವು ನಿಮ್ಮೊಡನೆ ಎಂದು ನಿಮಗಿತ್ತು.
ತಳ್ಳಿಬಳ್ಳಿಯನೆ ಹರಿದು ನಿಮ್ಮಲ್ಲಿಯೆ ನಲೆಗೊಂಡ ಕಾರಣ,
ಚೆನ್ನಮಲ್ಲೇಶ್ವರನ ಪಾದದಲ್ಲಿ ನಿರ್ಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Ayyā, nā kābudakke nanna śaktiyalla
nim'mindave kaṇḍenayyā.
Adēnu kāraṇavendaḍe:
Tanuva tōridiri,manava tōridiri, ghanava tōridiri.
Tanuva guruvigittu,manava liṅgakkittu.
Dhanava jaṅgamakkittu,
ivellavu nim'moḍane endu nimagittu.
Taḷḷibaḷḷiyane haridu nim'malliye nalegoṇḍa kāraṇa,
cennamallēśvarana pādadalli nirmuktaḷādenayyā
appaṇṇapriya cennabasavaṇṇā.