ಅಂದಂದಿನ ದಿನಕ್ಕೆ ಬಂದ ದಂದುಗಕ್ಕೆ
ಮನನಾಚದ ಪರಿಯ ನೋಡಾ!
ಕಂದದೀ ಮನವು, ಕುಂದದೀ ಮನವು
ಲಿಂಗದೇವನ ಒಲವು ಎಯ್ದದೆಂದು
ಮರುಗುವ ಪರಿಯ ನೋಡಾ!
ಮಹಾಲಿಂಗ ಕಲ್ಲೇಶ್ವರಯ್ಯಾ,
ಈ ಬೆಂದ ಮನವು, ಹೇಸದ ಪರಿಯ ನೋಡಾ!
Art
Manuscript
Music
Courtesy:
Transliteration
Andandina dinakke banda dandugakke
mananācada pariya nōḍā!
Kandadī manavu, kundadī manavu
liṅgadēvana olavu eydadendu
maruguva pariya nōḍā!
Mahāliṅga kallēśvarayyā,
ī benda manavu, hēsada pariya nōḍā!