ಅಯ್ಯಾ ವಿಪ್ರರೆಂಬವರು ಮಾತಂಗಿಯ
ಮಕ್ಕಳೆಂಬುದಕ್ಕೆ ಇದೇ ದೃಷ್ಟ.
ಮತ್ತೆ ವಿಚಾರಿಸಿ ಕೇಳಿದಡೆ ಹೇಳುವೆನು:
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು,
ಕಡಿದು ಹಂಚಿ ತಿಂದರಂದು ಗೋಮಾಂಸವ.
ಬಿಡದೆ ಅತ್ಯಂತ ಉಜ್ಞಕ್ರಮವೆಂದು ಹೋತನ ಕೊಂದು,
ಚಿಕ್ಕ ಚಿಕ್ಕವಾಗಿ ಕಡಿಮೆ ಭಕ್ಷಿಸಿದುದ ಕಂಡು,
ಮಿಕ್ಕ ಹದಿನೇಳುಜಾತಿ ವಿಪ್ರರ
ಕೈಯಲನುಗ್ರಹವ ಪಡೆದು, ತಿನಕಲಿತರಯ್ಯಾ.
ಶ್ವಪಚೋಪಿ ವಿಪ್ರ ಸಮೋ ಜಾತಿಭೇದಂ ನ ಕಾರಯೇತ್|
ಅಜಹತ್ಯೋಪದೇಶೀನಾಂ ವರ್ಣನಾಂ ಬ್ರಾಹ್ಮಣೋ ಗುರುಃ||
ಎಂಬುದಾಗಿ,
ಕಿರಿಕಿರಿದ ತಿಂದ ದ್ವಿಜರು ನೆರೆದು ವೈಕುಂಠಕ್ಕೆ ಹೋಹರೆ?
ನೆರೆಯಲೊಂದ ತಿಂದ ವ್ಯಾಧ ದ್ವಿಜರಿಂದಧಿಕ.
`ಭರ್ಗೋ ದೇವಸ್ಯ ಧೀಮಹಿ' ಎಂಬ
ದಿವ್ಯಮಂತ್ರವನೋದಿ, ನಿರ್ಬುದ್ಧಿಯಾದಿರಿ.
ಶಿವಪಥವನರಿಯದೆ ಬರುದೊರೆವೋದಿರಿ.
ಆದಡೀ ನರಕಕ್ಕೆ ಭಾಜನವಾದಿರಿ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣಂಗೆ ಸರಿಯೆ ಜಗದನ್ಯಾಯಿಗಳು.
Art
Manuscript
Music
Courtesy:
Transliteration
Ayyā viprarembavaru mātaṅgiya
makkaḷembudakke idē dr̥ṣṭa.
Matte vicārisi kēḷidaḍe hēḷuvenu:
Baḍagi mācaladēviya kulajeya māḍ'̔ihevendu,
kaḍidu han̄ci tindarandu gōmānsava.
Biḍade atyanta ujñakramavendu hōtana kondu,
cikka cikkavāgi kaḍime bhakṣisiduda kaṇḍu,
mikka hadinēḷujāti viprara
kaiyalanugrahava paḍedu, tinakalitarayyā.
Śvapacōpi vipra samō jātibhēdaṁ na kārayēt|
ajahatyōpadēśīnāṁ varṇanāṁ brāhmaṇō guruḥ||
Embudāgi,
kirikirida tinda dvijaru neredu vaikuṇṭhakke hōhare?
Nereyalonda tinda vyādha dvijarindadhika.
`Bhargō dēvasya dhīmahi' emba
divyamantravanōdi, nirbud'dhiyādiri.
Śivapathavanariyade barudorevōdiri.
Ādaḍī narakakke bhājanavādiri.
Idu kāraṇa, mahāliṅga kallēśvarā,
nim'ma śaraṇaṅge sariye jagadan'yāyigaḷu.