ಆಗಮಾಚಾರವಿಲ್ಲೆಂದು ಭಕ್ತರನಲ್ಲೆಂಬ
ಭ್ರಮಿತರು ನೀವು ಕೇಳಿರೆ!
ಮುಕ್ಕುಳಿಸಿದ ನೀರ ಮಜ್ಜನಕ್ಕೆರವುದಿದಾವಾಗಮಾಚಾರ?
ಸರವ ಕಟ್ಟಿ, ಪತ್ರೆಯ ಹರಿದು
ಹಾಕೂದಿದಾವ ಮಂತ್ರದೊಳಗು?
ಸರ್ರನೆ ಹರಿತಂದು ಸರ್ರನೆ
ಕಲ್ಲಲಿಡುವುದಿದಾವ ಪೂಜೆ?
ಬಹುಬುದ್ಧಿಗಲಿತು, ಬಹಳ ನುಡಿ
ಶಿವಭಕ್ತರ ಕೂಡೆ ಸಲ್ಲದು,
ಶರಣೆಂದು ಶುದ್ಧರಪ್ಪುದು.
ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರ
ನಿಲುವನು ತಾನೆ ಬಲ್ಲನು.
Art
Manuscript
Music
Courtesy:
Transliteration
Āgamācāravillendu bhaktaranallemba
bhramitaru nīvu kēḷire!
Mukkuḷisida nīra majjanakkeravudidāvāgamācāra?
Sarava kaṭṭi, patreya haridu
hākūdidāva mantradoḷagu?
Sarrane haritandu sarrane
kallaliḍuvudidāva pūje?
Bahubud'dhigalitu, bahaḷa nuḍi
śivabhaktara kūḍe salladu,
śaraṇendu śud'dharappudu.
Mahāliṅga kallēśvaranu tanna bhaktara
niluvanu tāne ballanu.