Index   ವಚನ - 34    Search  
 
ಒಲಿದೊಲಿಸಿಕೊಳ್ಳಬೇಕು, ಒಲಿದಲ್ಲದಿಲ್ಲ. ಹಲವು ಕೊಂಬಿಂಗೆ ಹಾರದಿರು, ಮರುಳೆ. ಅಟ್ಟಿ ನೋಡುವ, ಮುಟ್ಟಿ ನೋಡುವ, ತಟ್ಟಿ ನೋಡುವ, ಒತ್ತಿ ನೋಡುವ. ಅಟ್ಟಿದಡೆ ತಟ್ಟಿದಡೆ, ನಿಷ್ಠೆಯಂ ಬಿಡದಿರ್ದಡೆ, ತನ್ನನೀವ, ಮಹಾಲಿಂಗ ಕಲ್ಲೇಶ್ವರ.