Index   ವಚನ - 35    Search  
 
ಒಳಗೆ ಶೋಧಿಸಿ, ಹೊರಗಳವಡಿಸಿ, ಭಾವದಿಂ ಗುಡಿ ತೋರಣವ ಕಟ್ಟುವೆನಯ್ಯಾ. ಎನ್ನ ಲಿಂಗವೆ ಬಾರಯ್ಯಾ, ಎನ್ನ ದೇವ ಬಾರಯ್ಯಾ. ಎನ್ನ ಅಂತರಂಗದ ಪರಂಜ್ಯೋತಿರ್ಲಿಂಗವ ಇದರುಗೊಂಬೆನು ಬಾರಯ್ಯಾ. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಧರ್ಮವು ಬಾರಯ್ಯಾ.