ಕಂಗಳು ತುಂಬಿ ನಿಮ್ಮುವ ನೋಡುತ್ತ ನೋಡುತ್ತಲಯ್ಯಾ,
ಕಿವಿಗಳು ತುಂಬಿ ನಿಮ್ಮುವ ಕೇಳುತ್ತ [ಕೇಳುತ್ತ] ಲಯ್ಯಾ,
ಮನ ತುಂಬಿ ನಿಮ್ಮುವ ನೆನೆವುತ್ತ ನೆನೆವುತ್ತಲಯ್ಯಾ,
ಮಹಾಲಿಂಗ ಕಲ್ಲೇಶ್ವರದೇವರಲ್ಲಿ
ಸುಖಿಯಾಗಿರ್ದೆನಯ್ಯಾ.
Art
Manuscript
Music
Courtesy:
Transliteration
Kaṅgaḷu tumbi nim'muva nōḍutta nōḍuttalayyā,
kivigaḷu tumbi nim'muva kēḷutta [kēḷutta] layyā,
mana tumbi nim'muva nenevutta nenevuttalayyā,
mahāliṅga kallēśvaradēvaralli
sukhiyāgirdenayyā.