Index   ವಚನ - 37    Search  
 
ಕರ್ತೃ ಭೃತ್ಯನ ವಾಸಕ್ಕೆಯಿದ್ದಲ್ಲಿ, ಆತನ ಭಕ್ತಿಯನರಿತು, ತಾ ಒಡಗೂಡಿದಲ್ಲಿ, ಆತ ಕೊಟ್ಟುದ ತಾ ಮುಟ್ಟದೆ, ಆತನಲ್ಲಿ ದುರ್ವಾಕ್ಯ ದುಶ್ಚರಿತ್ರ ಪಗುಡಿ ಪರಿಹಾಸಕಂಗಳಂ ಬೀರದೆ, ಆತನ ಚಿತ್ತನೋವಂತೆ ಮತ್ತಾವ ಬಂಧನದ ಕಟ್ಟನಿಕ್ಕದೆ, ಕೃತ್ಯವೆಮಗೊಂದ ಮಾಡೆಂದು ನೇಮವ ಲಕ್ಷಿಸದೆ, ಆತ ತನ್ನ ತಾನರಿತು ಮಾಡಿದಲ್ಲಿ, ಅದು ತನಗೆ ಮುನ್ನಿನ ಸೋಂಕೆಂಬುದನರಿತು, ಗನ್ನಗದುಕಿನಿಂ ಬಿನ್ನಾಣದಿಂದೊಂದುವ ಮುಟ್ಟದೆ, ಆ ಪ್ರಸನ್ನವಪ್ಪ ವಸ್ತು, ಮಹಾಮಹಿಮ ಕಲ್ಲೇಶ್ವರಲಿಂಗ ತಾನಾದ ಶರಣ.