Index   ವಚನ - 40    Search  
 
ಕಲುನಡೆಯ ಪಶುಗಳೈದೆ ಕರೆವ ಹಯನಪ್ಪಡೆ, ಅಳೆಯ ಹಡೆಯದ ಲೋಕವೈ ಹೋಗಲೇಕೆ? ಕೈದುವ ಹಿಡಿದವರೆಲ್ಲಾ ನೆಟ್ಟನೆ ಕಲಿಗಳಾದರೆ, ಮಾರ್ಬಲಕಂಜಿ ತಿರುಗಲೇಕೆ? ಇಷ್ಟಲಿಂಗವೆಂದು ಕಟ್ಟಿಕೊಂಡವರೆಲ್ಲಾ ನೆಟ್ಟನೆ ಭಕ್ತರಾದಡೆ ಮುಟ್ಟಲಿಲ್ಲ, ದುರಿತ ದುಃಕರ್ಮ ಹುಟ್ಟಲಿಲ್ಲ ಭವದಲ್ಲಿ. ಆದಿತ್ಯ ಪುರಾಣೇ: ಪೂಜಕಾ ಬಹವಸ್ಸಂತಿ ಭಕ್ತಾಶ್ಚತಸಹಸ್ರಶಃ | ತತ್ರ ಪ್ರಸಾದಪಾತ್ರಸ್ತುದ್ವೌ ತ್ರಯೋ ಚತುಃ ಪಂಚವ್ಯೆ || ಇಂತೆಂದುದಾಗಿ, ಪೂಜಕರು ಹಲಬರಹರು, ಭಕ್ತರು ಲಕ್ಷಸಂಖ್ಯೆಗಳು. ಅಲ್ಲಿ ಪ್ರಸಾದ ಪಾತ್ರವಾಯಿತ್ತಾದಡೆ, ಇಬ್ಬರು ಮೂವರಲ್ಲದೆ ಐವರರಿವರಿಲ್ಲ, [ಮಹಾಲಿಂಗ]ಕಲ್ಲೇಶ್ವರಾ.