Index   ವಚನ - 45    Search  
 
ಕೋಗಿಲೆಗಳು ಉಗ್ಘಡಿಸಲು ಮಾಮರಂಗಳ ಮೇಲೆ, ತುಂಬಿಗಳು ಝೇಂಕಾರದಿಂ ಮೆರೆದು ಮೋಹರಿಸಲು, ಮಂದಾನಿಲಗಳ ತನ್ನ ಬೇಹಿಗೆ ಕಳುಹಲು, ಅನಂಗ ತನ್ನ ಬರವೆರಸಿ ಬಂದು ನಿಲಲು, ರಸಭರಿತವಾಗಿರ್ದ ಪರಿಯ ಕಬ್ಬಿನ ಬಿಲ್ಲೇರಿಸಿ, ಕುಸುಮ ಸರವನೆ ತೊಟ್ಟು, ಎಸಲಾರದೆ, ಬಿಲ್ಲು ಬೇರಾಗಿ, ಇವರೆಲ್ಲರ ಪರಿಯೆಂದು ಬಗೆದುಬಂದೆ, ಕಾಮಾ ನಿಲ್ಲದಿರೈ. ನಿನ್ನ ರೂಪ ಮಹಾಲಿಂಗ ಕಲ್ಲೇಶ್ವರದೇವ ಬಲ್ಲ. ಸಿದ್ಧರಾಮ ನಿನ್ನಳವಲ್ಲ, ಎಲವೊ ಕಾಮಾ.