Index   ವಚನ - 53    Search  
 
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ತಟ್ಟುವ ಮುಟ್ಟುವ ತಾಗುನಿರೋಧ ಕೊರೆತ ನೆರೆತಗಳ ಹಿಡಿವನೆ ಶಿವಶರಣನು? ಹಿಡಿಯನು. ಅದೇನು ಕಾರಣವೆಂದೆಡೆ, ಅದೆ[ಲ್ಲವೂ] ನಿನ್ನ ಮಾಯೆಯೆಂಬುದನು ಬಲ್ಲನಾಗಿ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರದೇವಾ, ನಿಮ್ಮ ಶರಣರು ನಿಜಗಲಿಗಳು.