Index   ವಚನ - 61    Search  
 
ದೇಹದೊಳಗು ದೇಹವಿದ್ದು, ದೇಹ ಕರಣೇಂದ್ರಿಯಂಗಳ ಪ್ರೇರಿಸುವನು. ಆ ಲೋಕದ ಆಗುಚೇಗೆ ತನಗಿಲ್ಲ. ಅದೆಂತೆಂದಡೆ: ಕಮಲಪತ್ರ ಜಲದಂತೆ, ಆ ಕಹಳೆಯಲ್ಲಿಹ ನಾದದಂತೆ, ಹುಡಿ ಹತ್ತದ ಗಾಳಿಯಂತೆ, ನುಡಿ ಹತ್ತದ ಶಬ್ದದಂತಿಪ್ಪನಯ್ಯಾ ಶಿವನು, ಸರ್ವಾಂತರ್ಯಾಮಿಯಾಗಿ ಮಹಾಲಿಂಗ ಕಲ್ಲೇಶ್ವರನು.