ವೇದವೆಂಬುದು ಮಾಯಿಕದ ಕೈಯ ವಿಕಾರದಲ್ಲಿ ಹುಟ್ಟಿತ್ತು.
ಆಗಮವೆಂಬುದು ಮಾಯಿಕದ ಬಾಯವಿಕಾರದಲ್ಲಿ ಹುಟ್ಟಿತ್ತು.
ಶಾಸ್ತ್ರವೆಂಬುದು ಮಾಯಿಕದ ದೇಹವಿಕಾರದಲ್ಲಿ ಹುಟ್ಟಿತ್ತು.
ಇದು ಕಾರಣ, ಇವ ತೂರಿ ಕಳೆದು
ಮಹಾಸ್ಥಲದಲ್ಲಿ ನಿಂದವರುಗಳನಲ್ಲದೆ,
ಮಹಾಲಿಂಗ ಕಲ್ಲೇಶ್ವರದೇವರು[ವೊ]ಲ್ಲರು.
Art
Manuscript
Music
Courtesy:
Transliteration
Vēdavembudu māyikada kaiya vikāradalli huṭṭittu.
Āgamavembudu māyikada bāyavikāradalli huṭṭittu.
Śāstravembudu māyikada dēhavikāradalli huṭṭittu.
Idu kāraṇa, iva tūri kaḷedu
mahāsthaladalli nindavarugaḷanallade,
mahāliṅga kallēśvaradēvaru[vo]llaru.