ಮದ್ದಿನ ಸುರೆಯ ತೊಗಲ ತಿತ್ತಿಯಲ್ಲಿ ತುಂಬಿ,
ಒಪ್ಪದಲ್ಲಿ ನಿಲಿಸಲಿಕೆ,
ಅದು ತನ್ನ ಉತ್ಪಾಪದಿಂದ ತಿತ್ತಿ ಹಾರಿ,
ನೆಲಕ್ಕೆ ಅಪ್ಪಳಿಸಿ ಬೀಳೂದ ಕಂಡೆ.
ದೃಷ್ಟವ ಕೇಳಲೇತಕ್ಕೆ ಕಾಯದ ತಿತ್ತಿಯಲ್ಲಿ ಜೀವ ಹೊಕ್ಕು,
ತ್ರಿವಿಧಮಲವಂ ಕಚ್ಚಿ ನಡೆವುದಕ್ಕೆ ಕಾಲಿಲ್ಲದೆ,
ನುಡಿವುದುಕ್ಕೆ ಬಾಯಿಲ್ಲದೆ, ನೋಡುವುದಕ್ಕೆ
ಕಣ್ಣಾಲಿ ಮರೆಯಾಯಿತ್ತು.
ಬೊಂಬೆ ಹೋಯಿತ್ತು ದೃಷ್ಟಾಂತರ ಬೊಂಬೆ ಕೆಟ್ಟಲ್ಲಿ.
ಮಣ್ಣಿಗೆ ಕಾದಿ, ಹೊನ್ನಿಗೆ ಹೋರಿ,
ಹೆಣ್ಣಿಂಗೆ ನಾಣುಗೆಟ್ಟ ಈ ಕುನ್ನಿಮನಕ್ಕೆ
ಇನ್ನೇವೆ ಧರ್ಮೇಶ್ವರ[ಲಿಂಗಾ]?
Art
Manuscript
Music
Courtesy:
Transliteration
Maddina sureya togala tittiyalli tumbi,
oppadalli nilisalike,
adu tanna utpāpadinda titti hāri,
nelakke appaḷisi bīḷūda kaṇḍe.
Dr̥ṣṭava kēḷalētakke kāyada tittiyalli jīva hokku,
trividhamalavaṁ kacci naḍevudakke kālillade,
nuḍivudukke bāyillade, nōḍuvudakke
kaṇṇāli mareyāyittu.
Bombe hōyittu dr̥ṣṭāntara bombe keṭṭalli.
Maṇṇige kādi, honnige hōri,
heṇṇiṅge nāṇugeṭṭa ī kunnimanakke
innēve dharmēśvara[liṅgā]?