ಮಣ್ಣೆಂಬ ಘಟದ ಮಧ್ಯದಲ್ಲಿ
ಹೊನ್ನೆಂಬ ಸುರೆ ಹುಟ್ಟಿತ್ತು.
ಹೆಣ್ಣೆಂಬ ಬಟ್ಟಲಲ್ಲಿ ಅಂತು
ಈಂಟಲಾಗಿ ಲಹರಿ ತಲೆಗೇರಿತ್ತು.
ಈ ಉನ್ಮತ್ತದಲ್ಲಿ ಮಗ್ನರಾದವರೆಲ್ಲರೂ
ಆರುಹಿರಿಯರೆಂತಪ್ಪರೊ?
ಭಕ್ತಿ ವಿರಕ್ತಿಯೆಂಬುದು ಇತ್ತಲೆ ಉಳಿಯಿತ್ತು.
ಧರ್ಮೇಶ್ವರಲಿಂಗದತ್ತ ಮುಟ್ಟಿದಡಂತಿಲ್ಲ.
Art
Manuscript
Music
Courtesy:
Transliteration
Maṇṇemba ghaṭada madhyadalli
honnemba sure huṭṭittu.
Heṇṇemba baṭṭalalli antu
īṇṭalāgi lahari talegērittu.
Ī unmattadalli magnarādavarellarū
āruhiriyarentapparo?
Bhakti viraktiyembudu ittale uḷiyittu.
Dharmēśvaraliṅgadatta muṭṭidaḍantilla.