Index   ವಚನ - 13    Search  
 
ಪರಬ್ರಹ್ಮ ಪರವಸ್ತುವಿನ ಪಂಚಮುಖದಲ್ಲಿ ಹುಟ್ಟಿದ ಪಂಚಮಹಾಭೂತವೆ ಶರೀರವಾಯಿತ್ತು. ಅದು ಎಂತೆಂದೊಡೆ: ಮಣ್ಣು ನೀರು ಶಿಲೆಯ ಕೂಡಿ ಭಿತ್ತಿಯನಿಕ್ಕುವಂತೆ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇವೈದು ಕೂಡಿ ಶರೀರ ನಿರ್ಮಿತವಾಯಿತಯ್ಯ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.