Index   ವಚನ - 32    Search  
 
ಆದಿ ಇದ್ದಂದು ನೀನೆ, ಆದಿ ಇಲ್ಲದಂದು ನೀನೆ; ಅನಾದಿ ಇದ್ದಂದು ನೀನೆ, ಅನಾದಿ ಇಲ್ಲದಂದು ನೀನೆ; ನಾದ ಬಿಂದು ಕಳೆ ಇದ್ದಂದು ನೀನೆ, ಅವು ಇಲ್ಲದಂದು ನೀನೆ; ಸಾವಯವ ನಿರವಯವವಿದ್ದಂದು ನೀನೆ, ಅವು ಇಲ್ಲದಂದು ನೀನೆ; ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.