ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಇದ್ದಂದು ನೀನೆ,
ಅವರಿಲ್ಲದಂದು ನೀನೆ;
ಪಿಂಡದ ಬೀಜವ ನವಬ್ರಹ್ಮರು ತಂದಂದು ನೀನೆ,
ಅವ ತಾರದಂದು ನೀನೆ.
ಆದಿ ಮಧ್ಯಾಂತವಿದ್ದಂದು ನೀನೆ,
ಅವು ಇಲ್ಲದಂದು ನೀನೆ;
ಪಿಂಡನಿರ್ಮಿತವಾದಂದು ನೀನೆ;
ಪಿಂಡಜ್ಞಾನವಾದಂದು ನೀನೆ,
ಪಿಂಡಜ್ಞಾನವಿಲ್ಲದಂದು ನೀನೆ;
ಸರ್ವರಾತ್ಮಜ್ಞಾನವಾಗಿ ತೋರುತ್ತಿದ್ದೆಯಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Brahma viṣṇu rudra īśvara sadāśiva iddandu nīne,
avarilladandu nīne;
piṇḍada bījava navabrahmaru tandandu nīne,
ava tāradandu nīne.
Ādi madhyāntaviddandu nīne,
avu illadandu nīne;
piṇḍanirmitavādandu nīne;
piṇḍajñānavādandu nīne,
piṇḍajñānavilladandu nīne;
sarvarātmajñānavāgi tōruttiddeyayyā
paramaguru paḍuviḍi sid'dhamallināthaprabhuve.