ಅನಾದಿವಿಡಿದು ಆದಿ, ಆದಿವಿಡಿದು ಸಾವಯವ;
[ಸಾವಯವವಿಡಿದು ನಿರ್ವಯ],
ನಿರ್ವಯವಿಡಿದು ಪಂಚಬ್ರಹ್ಮತ್ವ;
ಪಂಚಬ್ರಹ್ಮತ್ವವಿಡಿದು ತತ್ವಬ್ರಹ್ಮಾಂಡ,
ತತ್ವಬ್ರಹ್ಮಾಂಡವಿಡಿದು ಪಿಂಡಾಂಡ,
ಪಿಂಡಾಂಡವಿಡಿದು ಜ್ಞಾನ,
ಜ್ಞಾನವಿಡಿದು ನಿಂದ ನಿಲವು ನೀನೆ ಅಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Courtesy:
Transliteration
Anādiviḍidu ādi, ādiviḍidu sāvayava;
[sāvayavaviḍidu nirvaya],
nirvayaviḍidu pan̄cabrahmatva;
pan̄cabrahmatvaviḍidu tatvabrahmāṇḍa,
tatvabrahmāṇḍaviḍidu piṇḍāṇḍa,
piṇḍāṇḍaviḍidu jñāna,
jñānaviḍidu ninda nilavu nīne ayyā
paramaguru paḍuviḍi sid'dhamallināthaprabhuve.