Index   ವಚನ - 34    Search  
 
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಇದ್ದಂದು ನೀನೆ, ಅವರಿಲ್ಲದಂದು ನೀನೆ; ಪಿಂಡದ ಬೀಜವ ನವಬ್ರಹ್ಮರು ತಂದಂದು ನೀನೆ, ಅವ ತಾರದಂದು ನೀನೆ. ಆದಿ ಮಧ್ಯಾಂತವಿದ್ದಂದು ನೀನೆ, ಅವು ಇಲ್ಲದಂದು ನೀನೆ; ಪಿಂಡನಿರ್ಮಿತವಾದಂದು ನೀನೆ; ಪಿಂಡಜ್ಞಾನವಾದಂದು ನೀನೆ, ಪಿಂಡಜ್ಞಾನವಿಲ್ಲದಂದು ನೀನೆ; ಸರ್ವರಾತ್ಮಜ್ಞಾನವಾಗಿ ತೋರುತ್ತಿದ್ದೆಯಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.