ಕಂಡೆನೊಂದು ಸ್ವಪನವ ಕಾನನದ ಮಾಗಿಯೊಳು
ಚಂಡಕೋಟಿಪ್ರಭೆಯ ಮೀರುವ ಜ್ಯೋತಿಯನು
ಮುಂಡವ ಹೊಂದದೆ ತಲೆಯಂತರದೆ ನಲಿದಾಡಿ
ಮಂಡಲಕ್ಕೆ ಬೇರುವರಿದು ಮರುಳ್ಗಳ ಶಂಕೆಯ ಮೀರಿ
ಹಿಂಡುಸೂರ್ಯಗಳನೊಂದು ದ್ವಿಯಕ್ಷರದ ಪಕ್ಷಿಯು ನುಂಗಿ
ಕೊಂಡು ಉಗುಳಲಾರದಿರೆ ಬೆಳಗಾಗೆ ನಾನೆಚ್ಚತ್ತೆನು[1]
ಹಿಂದಣ ಮುಂದಣ ಮನೆಯ ಸಂದಿನಲ್ಲಿ ಉರಿವಜ್ಯೋತಿ
ಬಂದು ನಟ್ಟನಡುಸಮುದ್ರದೊಳು ಹೊಕ್ಕು
ನೊಂದಿ ನಂದದುರಿವುತಿರೆ, ಅಂಧಾಕಾರ ಕವಿದ ಲೋಕ,
ಮುಂದುಗೆಟ್ಟು ಕಣ್ಗಾಣದಿರಲು ಬೆಳಗಲೆಚ್ಚತ್ತೆನೊ[2]
ತಮ ಹೆಚ್ಚಿ ಜ್ಯೋತಿಯ ನುಂಗಿ, ಕಮಲ ಪರಿಮಳವ ನುಂಗಿ
ಭ್ರಮರ ಕಂಪನೊಲ್ಲದೆ ತಾ ಬಾವಿಯ ಬೀಳೆ
ದ್ಯುಮಣಿಯನು ಜಲ ನುಂಗಿ ಕಾಳಗವಿದ ಲೋಕವೆಲ್ಲ
ಭ್ರಮಿತರಾಗಿ ಗೊಂದಿಲಿಯ ಮರ[ನ]ನೆಂಬಲಾನೆಚ್ಚತ್ತೆನೊ[3]
ಕಂಬದೊಳಗಿಹ ಮಾಣಿಕವ ಕಳಬಂದು ನಾಲ್ವರು ಮಂದಿ
ಅಂಬರಗತ್ತಲೆಯ ಮಾರಿಯೊಳಿರುತಿರಲು
ನಂಬುಗಿಯಾ ಭೂತ ಹೆಚ್ಚಿ ನಾಡ ನುಂಗುತಲಿ ಬರುವ
ಸಂಭ್ರಮವ ಕಂಡು ಹೆದರಿ ನಾನೆಚ್ಚತ್ತೆನಯ್ಯಾ[4]
ಪ್ರಯಳದ ಮುಖದ ಪಕ್ಷಿ ಕಾಕವಿಂಡ ಕೂಡಿಕೊಂಡು
ಸಲೆ ಪರಮಗೂಡಿನೊಳಿಪ್ಪ ಪಕ್ಕಿಗೆ ಮುಕುರಿ ತಾವು
ಕೊಲ್ಲೆವೆನ್ನಲದು ಗುರುಸಿದ್ಧಮಲ್ಲನ ಪಾದಂಘ್ರಿಯೊಳು
ನೆಲಸಿ ಮಾಯವಾಗಲಾನು ಎಚ್ಚತ್ತೆ ಪಿಂಡಜ್ಞಾನದಿ[5]
Art
Manuscript
Music
Courtesy:
Transliteration
Kaṇḍenondu svapanava kānanada māgiyoḷu
caṇḍakōṭiprabheya mīruva jyōtiyanu
muṇḍava hondade taleyantarade nalidāḍi
maṇḍalakke bēruvaridu maruḷgaḷa śaṅkeya mīri
hiṇḍusūryagaḷanondu dviyakṣarada pakṣiyu nuṅgi
koṇḍu uguḷalāradire beḷagāge nāneccattenu[1]
hindaṇa mundaṇa maneya sandinalli urivajyōti
bandu naṭṭanaḍusamudradoḷu hokku
nondi nandadurivutire, andhākāra kavida lōka,
mundugeṭṭu kaṇgāṇadiralu beḷagaleccatteno[2]
Tama hecci jyōtiya nuṅgi, kamala parimaḷava nuṅgi
bhramara kampanollade tā bāviya bīḷe
dyumaṇiyanu jala nuṅgi kāḷagavida lōkavella
bhramitarāgi gondiliya mara[na]nembalāneccatteno[3]
kambadoḷagiha māṇikava kaḷabandu nālvaru mandi
ambaragattaleya māriyoḷirutiralu
nambugiyā bhūta hecci nāḍa nuṅgutali baruva
sambhramava kaṇḍu hedari nāneccattenayyā[4]
prayaḷada mukhada pakṣi kākaviṇḍa kūḍikoṇḍu
sale paramagūḍinoḷippa pakkige mukuri tāvu
kollevennaladu gurusid'dhamallana pādaṅghriyoḷu
nelasi māyavāgalānu eccatte piṇḍajñānadi[5]