Index   ವಚನ - 48    Search  
 
ಶಕ್ತಿ ಸಾಧನೆಯ ಸಾಧಿಸಿ, ಆನೆ ಸೇನೆ ತಳತಂತ್ರ ಮಾರ್ಬಲ ಅಲಗು ಈಟಿಯ ಮೊನೆ ಹಿಡಿದು ಕಾದುವರುಂಟೆ? ಮಂತ್ರಿ ಮನ್ನೆಯ ಬಂಟರೆಲ್ಲರು ರಣದೊಳಗೆ ಕಾದಿ ಗೆಲ್ಲುವರಲ್ಲದೆ. ಮಾಯಾಪಾಶವೆಂಬ ರಾಕ್ಷಿ, ಕರಣಗುಣವೆಂಬ ಭೂತಗಳ ಕೂಡಿಕೊಂಡು, ಭೂಮಂಡಲ ಹತಮಾಡುತ, ತಿಂದು ತೇಗುತ ಬರುತಿದೆ. ಮಾಯಾರಣ್ಯವ ಕಾದಿ ಗೆಲುವರನಾರನೂ ಕಾಣೆ ಎನ್ನಾಳ್ದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.